ಬಾಂಕೈ ಎಂಬ ಗುರುವಿನ ಬಳಿ ಒಂದಷ್ಟು ವಿದ್ಯಾರ್ಥಿಗಳು ಧ್ಯಾನದ ವಿಧಿಗಳನ್ನು ಕಲಿಯುವುದಕ್ಕೆ ಬಂದಿದ್ದರು. ಬೇರೆ ಬೇರೆ ಭಾಗಗಳಿಗೆಸಂಬಂಧಿಸಿದವರಾಗಿದ್ದರಿಂದ ಆ ಇಡೀ ಗುಂಪು ಬಹಳ ವೈವಿಧ್ಯಮಯವಾಗಿತ್ತು. ತರಗತಿಗಳು ಆರಂಭವಾದ ಮೇಲೆ ಕೆಲವು ದಿನಗಳಲ್ಲಿ ಒಬ್ಬವಿದ್ಯಾರ್ಥಿ ಕಳ್ಳತನ ಮಾಡುತ್ತಾ ಸಿಕ್ಕಿ ಬಿದ್ದ. ಆತನ ಕುರಿತು ಬಾಂಕೈ ಬಳಿ ದೂರು ಸಲ್ಲಿಸಲಾಯಿತು. ಆದರೆ ಅದರ ಕುರಿತು ಗುರುಗಳು ಯಾವುದೇಕ್ರಮ ಕೈಗೊಳ್ಳಲಿಲ್ಲ. 

ಇನ್ನೊಂದಷ್ಟು ಸಮಯದ ನಂತರ ಅದೇ ವಿದ್ಯಾರ್ಥಿ ಮತ್ತೆ ಕದಿಯುತ್ತಾ ಸಿಕ್ಕಿ ಹಾಕಿಕೊಳ್ಳುತ್ತಾನೆ. ಇದು ಅನೇಕ ವಿದ್ಯಾರ್ಥಿಗಳಲ್ಲಿಸಿಟ್ಟನ್ನುಂಟುಮಾಡಿತು. ಮೌಖಿಕ ದೂರಿಗೆ ಹಿಂದಿನ ಬಾರಿ ಗುರುಗಳು ಯಾವುದೇ ಕ್ರಮ ಕೈಗೊಳ್ಳದಿದ್ದ ಕಾರಣ, ಈ ಬಾರಿ ಲಿಖಿತ ರೂಪದಲ್ಲಿಗುರುಗಳಿಗೆ ದೂರನ್ನು ಸಲ್ಲಿಸಿದರು. ಈ ಬಾರಿಯ ದೂರಿನಲ್ಲಿ ಗುರುಗಳು ಯಾವುದೇ ಕ್ರಮ ಕೈಗೊಳ್ಳದಿದ್ದರೆ ತಾವೆಲ್ಲರೂ ಆಶ್ರಮವನ್ನು ಬಿಟ್ಟುತೆರಳುವುದಾಗಿ ಬೆದರಿಕೆಯನ್ನು ಒಡ್ಡುತ್ತಾರೆ. 

ಲಿಖಿತ ದೂರನ್ನು ನೋಡಿದ ಗುರು, ಎಲ್ಲಾ ವಿದ್ಯಾರ್ಥಿಗಳನ್ನು ತನ್ನ ಬಳಿಗೆ ಕರೆಸುತ್ತಾನೆ. ಅವರನ್ನೆಲ್ಲಾ ಉದ್ದೇಶಿಸಿ, “ನೀವೆಲ್ಲರೂ ಬಹಳ ಬುದ್ಧಿವಂತರು. ನಿಮಗೆ ಯಾವುದು ಸರಿ, ಯಾವುದು ತಪ್ಪು ಎಂಬುದು ತಿಳಿದಿದೆ. ನೀವುಗಳು ಬೇರೆ ಆಶ್ರಮಕ್ಕೆ ಹೋಗಿಯೂ ಅಧ್ಯಯನವನ್ನು ಮುಂದುವರೆಸಬಹುದು. ಆದರೆ ಆ ಹುಡುಗನಿಗೆ ಈ ವಿಷಯ ತಿಳಿದಿಲ್ಲ. ಸರಿ ಮತ್ತು ತಪ್ಪುಗಳನ್ನು ಆತ ಸರಿಯಾಗಿ ವಿಶ್ಲೇಷಿಸಲಾರ. ಹಾಗಿರುವಾಗ, ನಾನು ಆತನನ್ನುಆಶ್ರಮದಿಂದ ಹೊರಕಳಿಸಿದರೆ ಆತನಿಗೆ ಇವುಗಳನ್ನು ಕಲಿಸುವವರು ಯಾರು? ಹಾಗಾಗಿ ನೀವೆಲ್ಲಾ ಹೋದರೂ, ನಾನು ಆತನನ್ನು ಕಳುಹಿಸಲಾರೆ” ಎಂದರು. 

ಕಳ್ಳತನ ಮಾಡುತ್ತಿದ್ದ ವಿದ್ಯಾರ್ಥಿಯ ಕಣ್ಣುಗಳು ತುಂಬಿಕೊಂಡವು. ಆತನ ಕದಿಯುವ ಚಪಲವೆಲ್ಲಾ ಅಲ್ಲೇ ಕರಗಿ ಹೋಯಿತು. 

ಬಾಂಕೈ ಇಂದ ನಾವು ಕಲಿಯಬೇಕಿರುವುದು ಒಬ್ಬ ಗುರುವಿನ ಮೂಲ ಕರ್ತವ್ಯದ ಕುರಿತು. ಕಲಿಸುವ ಹೆಚ್ಚಿನ ಅಗತ್ಯ ಇದ್ದುದು ಯಾವ ವಿದ್ಯಾರ್ಥಿಗೆಎಂಬುದರ ಸ್ಪಷ್ಟತೆ ಅವನಲ್ಲಿತ್ತು. ಆ ಒಬ್ಬ ವಿದ್ಯಾರ್ಥಿಗೋಸ್ಕರ ಆತ ತನ್ನ ಇತರ ಎಲ್ಲಾ ವಿದ್ಯಾರ್ಥಿಗಳನ್ನೂ ಕಳೆದುಕೊಳ್ಳಲು ತಯಾರಾಗಿದ್ದ. ಇದುಆತನ ವೃತ್ತಿ ನೈತಿಕತೆ. ನಾವೆಷ್ಟೋ ಬಾರಿ ಈ ರೀತಿಯ ಕಠಿಣ ಸವಾಲುಗಳನ್ನು ಸ್ವೀಕರಿಸಲು ಸಿದ್ಧರಿರುವುದಿಲ್ಲ. 

ಪ್ರತಿಯೊಬ್ಬ ವ್ಯಕ್ತಿಗೂ ಆತನದ್ದೇ ಆದ ನೈತಿಕತೆಯನ್ನು ಅನುಸರಿಸುವ ಅಗತ್ಯ ಇದೆ. ಉದಾಹರಣೆಗೆ ಅನೇಕ ವಿದ್ಯಾರ್ಥಿಗಳು ಕಷ್ಟದ ವಿಷಯವನ್ನುತಮ್ಮಿಂದ ದೂರ ಇಟ್ಟು ಬಿಡುತ್ತಾರೆ. ಇತರ ಸುಲಭವಾದ ವಿಷಯಗಳನ್ನೇ ಕಲಿಯುವುದರಲ್ಲಿ ತಮ್ಮ ಸಮಯನ್ನು ವ್ಯಯಿಸುತ್ತಾರೆ. ಯಾವತ್ತೂ ನಾವುಸವಾಲುಗಳನ್ನು ಎದುರಿಸುತ್ತಾ ಹೋಗುತ್ತೀಯೋ, ಆವಾಗಲೇ ನಾವು ನಿಜವಾಗಲೂ ಏನನ್ನು ಸಾಧಿಸಬೇಕೋ, ಅದನ್ನು ಸಾಧಿಸಲು ಸಾಧ್ಯ. ನಮ್ಮಕರ್ತವ್ಯ ಮತ್ತು ನೈತಿಕತೆ ಎರಡನ್ನೂ ಯಾವತ್ತು ಅನುಸರಿಸುತ್ತೇವೋ, ಆವಾಗ ವೈಯಕ್ತಿಕ ಮತ್ತು ಸಾಮಾಜಿಕ ಸ್ವಾಸ್ಥ್ಯಕ್ಕೆ ನಾವುಕಾರಣರಾಗಬಹುದು. 

 

ಅಕ್ಷರ ದಾಮ್ಲೆ
ಮಾನಸಿಕ ತಜ್ಞ