ಕೋಪವೆಂಬ ಶಾಪ
ಒಮ್ಮೆ ಒಬ್ಬ ವಿದ್ಯಾರ್ಥಿ ಬಾಂಕೈ ಎಂಬ ಜ಼ೆನ್ ಗುರುವಿನ ಬಳಿ ಬಂದು "ಗುರುಗಳೇ, ನನಗೆ ಸಿಕ್ಕಾಪಟ್ಟೆ ಸಿಟ್ಟು ಬರುತ್ತದೆ. ನಾನು ಅದನ್ನು ಹೇಗೆ ಕಡಮೆಮಾಡಿಕೊಳ್ಳಬಹುದು?" ಎಂದು ಕೇಳಿದ. "ಓ, ನಿನ್ನಲ್ಲಿ ಅದೇನೋ ವಿಚಿತ್ರವಾದದ್ದು ಇದೆ! ಅದೇನು ಅಂತ ನಾನೊಮ್ಮೆ ನೋಡುತ್ತೇನೆ" ಎಂದರು ಗುರುಗಳು. "ಹಾಗೆ ನಿಮಗೆ ನಾನು ತೋರಿಸಲು ಸಾಧ್ಯವಿಲ್ಲ. ಈಗ ನನಗೆ ಕೋಪ ಬರುತ್ತಿಲ್ಲ" ಎಂದ ಶಿಷ್ಯ. "ಹಾಗಿದ್ದರೆ, ಯಾವಾಗ ನೀನು ನನಗೆ ನಿನ್ನ ಕೋಪವನ್ನು ತೋರಿಸಬಹುದು?" ಎಂದು ಮರು ಪ್ರಶ್ನೆ ಬಂತು. "ಅದು [...]